CBSE Class 10 Kannada Syllabus 2026-27
CBSE Class 10 Kannada Session 2026-27. This syllabus focuses on developing essential Kannada language skills – listening, speaking, reading, and writing (LSRW) – crucial for social connection and personal growth. The curriculum is designed for engaging and effective learning, integrating modern teaching methods. It covers Prose, Poems, and Supplementary Reading sections, all based on the prescribed textbook. Students will also hone their creative writing abilities through essays, letters, and reports, alongside strengthening grammar and comprehension. The syllabus includes guidelines for internal assessment, promoting holistic development and preparing students to be responsible citizens. The course aims to make learning Kannada enjoyable and impactful.
Quick info
| Board | CBSE |
|---|---|
| Class | 10 |
| Subject | Kannada |
| Session | 2026-27 |
| Language | English |
| Type | Syllabus |
Syllabus PDF preview
Read page by page below. PDF is streamed from the official NCERT website — no download button on this page.
Full document text
KANNADA SYLLABUS 2026-27
CODE NO 015
CLASS - IX
Content List
S.No CONTENT PAGE No
1 Background/Rationale 3-4
2 Aims & Objectives 4
3 Course Structure 5-6
4 Guidelines for internal assessment 7
(Practical/ Projects etc) 5 Prescribed Textbook 8 2
ತಾರ್ಕಿಕ ಹಿನ್ನೆಲೆ: (Rationale)
ಯಾವುದೇ ಭಾಷೆ ಸಾಮಾಜಿಕ ಸಂಪರ್ಕವನ್ನು ಸಾಧಿಸುವ ಸಂಪರ್ಕ ಕೊಂಡಿಯಾಗಿದೆ. ಮಾನವ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಲು ಭಾಷೆ ಮಾಧ್ಯಮವಾಗಿದೆ. ಅದರಲ್ಲೂ ಮಾತೃಭಾಷೆ ಮಾನವ ಬದುಕಿನ ಜೀವತಂತುವಿದ್ದಂತೆ. ಹೀಗಾಗಿ ಮನುಷ್ಯ ಬಾಳಲು-ಬೆಳೆಯಲು ಮಾತೃಭಾಷೆ ಅತ್ಯಂತ ಅಗತ್ಯವಾಗಿದೆ.
ಕನ್ನಡ ಭಾಷಾ ಪಠ್ಯಗಳನ್ನು ವಿದ್ಯಾರ್ಥಿಗೆ ಗ್ರಹಿಕೆ ಹಾಗೂ ಆನಂದದಾಯಕ ಕಲಿಕೆಗೆ ಪೂರಕವಾಗಿ ರಚಿಸಲಾಗಿದೆ. ಪಠ್ಯಪುಸ್ತಕಗಳು ಜ್ಞಾನಾರ್ಜನೆಯ ಉದ್ದೇಶವನ್ನು ನೆರವೇರಿಸಬೇಕು. ಕಲಿಕೆ ಹಾಗೂ ಕಲಿಸುವಿಕೆಯ ನಿರ್ಧಾರಿತ ವಿಧಾನ ಮತ್ತು ಮೌಲ್ಯವನ್ನು ಸಾರ್ವತ್ರಿಕ ಶೈಕ್ಷಣಿಕ ನೆಲೆಯಲ್ಲಿ ಮೌಲ್ಯೀಕರಿಸುವ ಉದ್ದೇಶದಿಂದ ಪಠ್ಯಪುಸ್ತಗಳನ್ನು ಇಡಲಾಗಿದೆ.
ಪಠ್ಯಪುಸ್ತಕಗಳಲ್ಲಿ ನೂತನ ವಿಧಾನಗಳಾದ ಅಂತರ್ಗತ ವಿಧಾನ ರಚನಾತ್ಮಕ ವಿಧಾನ ಹಾಗೂ ಸುರುಳಿಯಾಕಾರದ ವಿಧಾನಗಳನ್ನು ಅಳವಡಿಸಲಾಗಿದೆ. ಪಠ್ಯಪುಸ್ತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಚನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮರ್ಥ್ಯಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಪಠ್ಯವಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಜೀವನ ಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ತನ್ಮೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.
ಭಾಷಾ ಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರಗ್ರಂಥಗಳಿಂದ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮರ್ಥ್ಯಗಳಿಗೆ ಒತ್ತು ನೀಡಲಾಗಿದೆ. ಈ ಕೌಶಲಗಳೊಂದಿಗೆ ಕ್ರಿಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞೆ, ಪ್ರಶಂಸಾ ಮನೋಭಾವ, ಮೌಲ್ಯಗಳ ಸಂವರ್ಧನೆಗೆ ಅನುವು ಮಾಡಿಕೊಡಬೇಕು. ಈ ಸಾಮರ್ಥ್ಯ ಮಕ್ಕಳಲ್ಲಿ ಬಂದಾಗ ಅವರು ಪರೀಕ್ಷೆಗಳಿಗಾಗಿ ಕಂಠಪಾಠಕ್ಕೆ ಶರಣು ಹೋಗಬೇಕಾಗಿಲ್ಲ. ಪಠ್ಯಪುಸ್ತಕವು ಭಾಷಾ ಕೌಶಲಗಳ ಸಂವರ್ಧನೆಗೆ ಒಂದು ಪೂರಕ ವಸ್ತುವೆಂದು ಪರಿಗಣಿಸಲು, ಮಕ್ಕಳ ಮನೋವೈಶಾಲ್ಯವನ್ನು ಬೆಳೆಸಲು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪಠ್ಯಪುಸ್ತಕದಲ್ಲಿ ಒದಗಿಸಲಾಗಿದೆ. ಅಭಿವ್ಯಕ್ತಿ ಹಾಗು ಸಂವಹನ ಕೌಶಲಗಳ ಸಂವರ್ಧನೆಯೇ ಕಲಿಕೆಯ ಗುರಿಯೆಂದು ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು ಮಕ್ಕಳಲ್ಲಿ ಕಲಿಯುವ ಕಲೆ ಹಾಗೂ ಕಲಿತುದುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿಯನ್ನು ಮಕ್ಕಳಲ್ಲಿ ವೃದ್ಧಿಮಾಡುತ್ತದೆ.
ಮಾತೃಭಾಷೆಯ ಜೊತೆಗೆ ಸ್ಥಳೀಯ ಸಂಸ್ಕೃತಿ, ಇತಿಹಾಸ, ನಾಡು-ನುಡಿಯ ಬಗೆಗೆ ಹಿರಿಯರ ಚಿಂತನೆ, ವೈಚಾರಿಕ ಚಿಂತನೆಗಳನ್ನೊಳಗೊಂಡ ಪಾಠಗಳನ್ನು ಪರಿಚಯಿಸಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ಮತ್ತು
ಲಿಂಗಸಮಾನತೆಯನ್ನು ಕಾಯ್ದುಕೊಳ್ಳಲಾಗಿದೆ. ಸೈದ್ಧಾಂತಿಕ ಭಾಷಾಭ್ಯಾಸದಲ್ಲಿ ವ್ಯಾಕರಣ ಸರಳವಾಗಿ ಪರಿಚಯಿಸಲಾಗಿದೆ. ಪಠ್ಯಪೋಷಕ ಅಧ್ಯಯನದಲ್ಲಿ ವಿದ್ಯಾರ್ಥಿಯ ಗ್ರಹಿಕಾ ಸಾಮರ್ಥ್ಯವನ್ನು ವೃದ್ಧಿಸುವ ಪಾಠಗಳನ್ನು ಅಳವಡಿಸಲಾಗಿದೆ.
9ನೇ ತರಗತಿಯ ಪಠ್ಯಪುಸ್ತಕಗಳು ಒಂದು ದೃಷ್ಟಿಯಲ್ಲಿ ವೈಶಿಷ್ಟ್ಯಪೂರ್ಣವಾಗಿವೆ. ಈ ಪಠ್ಯಪುಸ್ತಕಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಮರ್ಥ್ಯ ಹಾಗೂ ಕೌಶಲಗಳನ್ನು ಬೆಳಸಿಕೊಳ್ಳಲು ಸಹಾಯ ಮಾಡುತ್ತವೆ.
ಗುರಿಗಳು ಮತ್ತು ಉದ್ದೇಶಗಳು:(Aims & Objectives)
- ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಜೋಡಿಸುವ ಮತ್ತು ಅನ್ವಯಿಸಿಕೊಳ್ಳುವ ಅವಕಾಶವನ್ನು ನೀಡುವುದು.
- ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು ಮತ್ತು ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿಪಡಿಸುವುದು.
- ಭಾಷಾ ಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರಗ್ರಂಥಗಳಿಂದ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮರ್ಥ್ಯಗಳಿಗೆ ಒತ್ತು ನೀಡಲಾಗಿದೆ.
- ಓದುವುದು ಮತ್ತು ಬರೆಯುವುದನ್ನು ಕಲಿಯಲು ಮೌಖಿಕ ಭಾಷೆ ಮತ್ತು ಕಲಿಯುವವರು ತನ್ನೊಂದಿಗೆ ತರುವ ಪ್ರಪಂಚದ ಜ್ಞಾನ ಮತ್ತು ಅನುಭವದ ಮೂಲಕ ನಿರ್ಮಿಸಲಾದ ಅಡಿಪಾಯದ ಅಗತ್ಯವಿದೆ ಎಂದು ಅರ್ಥಮಾಡಿಕೊಳ್ಳುವುದು. ಆದ್ದರಿಂದ ಭಾಷಾ ವರ್ಗದಲ್ಲಿ ಮೌಖಿಕ ಭಾಷೆಯನ್ನು ಬಳಸುವ ವಿವಿಧ ಅನುಭವಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವ ಪ್ರಾಮುಖ್ಯತೆಯನ್ನು ನೀಡುವುದು.
- LSRW ನ ಕೌಶಲ್ಯಗಳನ್ನು ಪ್ರತ್ಯೇಕ ಕೌಶಲ್ಯಗಳಾಗಿ ನೋಡಬಾರದು ಮತ್ತು ಕಲಿಸಬಾರದು ಎಂದು ಅರ್ಥಮಾಡಿಕೊಳ್ಳುವುದು. ಏಕೆಂದರೆ ಅವುಗಳು ಒಂದನ್ನೊಂದು ಹೆಣೆದುಕೊಂಡಿವೆ ಮತ್ತು ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾಗುವುದಿಲ್ಲ.
- ಸ್ಥಳೀಯವಾದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಭಾಷಾ ಸಾಮರ್ಥ್ಯದ ಮೂಲಕ ಅವುಗಳಿಗೆ ಹೆಚ್ಚು ಒತ್ತು ನೀಡುವುದು.
- ಆತಂಕ–ಮುಕ್ತ, ಶಾಂತ ಮತ್ತು ಪ್ರೇರಿತ ಮನಸ್ಸಿನ ಸ್ಥಿತಿಯಲ್ಲಿ ಭಾಷೆಗಳನ್ನು ಉತ್ತಮವಾಗಿ ಕಲಿಸುವುದು ಮತ್ತು ಭಾಷಾ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವುದು
- ಭಾರತದ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ನೀತಿಯನ್ವಯ ಮಕ್ಕಳ ಅವಶ್ಯಕತೆಗಳಿಗೆ ತಕ್ಕಂತೆ ಸ್ಪಂದಿಸುವುದು.
********
COURSE STRUCTURE KANNADA CODE NO. 015 CLASS IX 2026-27
SL No Prose 1 Prajanisthe 2 Bedagina Tana Jaipur 3 Aadarsha Shishaka Sarvepalli Radhakrishnan 4 Janapada Kalegala Vaibhava 5 Haraleele Poems 1 Hosa Hadu 2 Parivala 3 Hemanta 4 Ninna muttina sattigeyanittu salahu 5 Kannada Nadu Nudi Pathya Pooraka Adhyayana (Non-detailed portion in the same text book) 1 Putta Hakki 2 Nannase 3 Urida baduku 4 Gunasagari Pandari Bai Creative writing
- Prabandha (Two essays from textbook)
- Pathra Lekhana (Application /official letter)
- Varadi
- Grammar
- Unseen Comprehensive Passage (One Unseen Comprehensive About Karnataka Context)
- Seen Comprehensive Passage Theory Total Internal Assessment
Frequently asked questions
What is the code number for Kannada in CBSE Class 10?
The code number for Kannada in CBSE Class 10 is 015.
What are the main components of the Kannada course structure?
The Kannada course structure includes Prose, Poems, Pathya Pooraka Adhyayana (Non-detailed portion), Creative Writing, Grammar, and Comprehensive Passages.
What skills are emphasized in the Kannada syllabus?
The syllabus emphasizes the development of listening, speaking, reading, and writing (LSRW) skills, alongside creative expression and comprehension.
What types of creative writing are included?
Creative writing includes essay writing (Prabandha), letter writing (Pathra Lekhana), and report writing (Varadi).
Does the syllabus mention a prescribed textbook?
Yes, the syllabus mentions a prescribed textbook from which the Prose, Poems, and Non-detailed portions are drawn.
What is the focus of the 'Rationale' section?
The Rationale section highlights the importance of Kannada as a mother tongue for social connection, personal development, and the use of modern pedagogical approaches in learning.
CBSE Class 10 Kannada syllabus 2026-27. Last updated 10 Aug 2026.